(೧೯೪೨, ಜೂನ್, ೧೬-೨೦೧೪, ಫೆಬ್ರವರಿ, ೨೮) ಸಿ. ಆರ್. ಸಿಂಹರವರು ಕರ್ನಾಟಕದ ನಾಟಕ ಹಾಗೂ ಚಲನಚಿತ್ರ ನಿರ್ದೇಶಕ ಮತ್ತು ನಟರು. == ಜನನ == ೧೯೪೨ ರ ಜೂನ್ ೧೬ ರಂದು ಚನ್ನಪಟ್ಟಣದಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಶಾಸ್ತ್ರಿ. ತಾಯಿ ಲಲಿತಮ್ಮ. ತಮ್ಮ ೧೨ ನೆಯ ವಯಸ್ಸಿನಲ್ಲೇ ರಂಗಭೂಮಿ ಪ್ರವೇಶಿಸಿದ್ದರು. ೧೯೭೨ ರಲ್ಲಿ 'ನಟರಂಗ' ವೆಂಬ ಒಂದು ಕಲಾತಂಡವನ್ನು ಕಟ್ಟಿದ್ದರು. ೧೯೮೩ ರಲ್ಲಿ 'ವೇದಿಕೆ' ತಂಡವನ್ನು ಸ್ಥಾಪಿಸಿದರು. ಕಾಕನಕೋಟೆ, ತುಘಲಕ್, ಸಂಕ್ರಾಂತಿ, ಮೊದಲಾದ ಖ್ಯಾತ ನಾಟಕಗಳನ್ನು ನಿರ್ದೆಶಿಸಿದರು. ಸುಮಾರು ೧೫೦ ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ಅಭಿನಹಿಸಿದ್ದ ಸಿಂಹ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. == ಪ್ರಶಸ್ತಿ ಪುರಸ್ಕಾರಗಳು == ೨೦೦೩ ಸಂಗೀತ ನಾಟಕ ಅಕ್ಯಾಡೆಮಿ ಪ್ರಶಸ್ತಿ ಕರ್ನಾಟಕ ರಾಜ್ಯ ಅಕ್ಯಾಡೆಮಿ ಪ್ರಶಸ್ತಿ ಕೆಂದ್ರ ಸಂಗೀತ ನಾಟಕ ಅಕ್ಯಾಡೆಮಿ ಪ್ರಶಸ್ತಿ ಆರ್ಯಭಟ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ == ಚಲನಚಿತ್ರಗಳಲ್ಲಿ ಮತ್ತು ಟೆಲಿವಿಶನ್ ಧಾರಾವಾಹಿಗಳಲ್ಲಿ ನಟನೆ == ಇಂದಿನ ರಾಮಾಯಣ, ನೀ ಬರೆದ ಕಾದಂಬರಿ, ಪರಮೇಶಿ ಪ್ರೇಮಪ್ರಸಂಗ,ರಾಯರು ಬಂದರುಮಾವನ ಮನೆಗೆ, ನೀ ತಂದ ಕಾಣಿಕೆ, ಮೊದಲಾದ ಕನ್ನಡ ಚಿತ್ರಗಳಲ್ಲಿ ಪೋಷಕ ನಟನಾಗಿ ಕಾಣಿಸಿಕೊಂಡಿದ್ದರು, ಸುಪ್ರಸಿದ್ಧ ನಟ ನಿರ್ದೇಶಕ ಶಂಕರ್ ನಾಗ್ ರವರ,'ಮಾಲ್ಗುಡಿ ಡೇಸ್ ಟೆಲಿವಿಶನ್ ಧಾರಾವಾಹಿ'ಯಲ್ಲೂ ಅಭಿನಯಿಸಿದ್ದರು. == ನಟಿಸಿದ ಚಿತ್ರಗಳು == == ನಾಟಕಗಳು == ತಲೆದಂಡ ತುಘಲಕ್ ಕಾಕನಕೋಟೆ ಟಿಪಿಕಲ್ ಟಿಪಿ ಕೈಲಾಸಂ == ನಿಧನ == ಹಿರಿಯ ನಟ ಸಿಂಹ, ಬಹಳ ವರ್ಷಗಳಿಂದ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಸೇವಾಕ್ಷೇತ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅದು ಫಲಕಾರಿಯಾಗದೆ, ೨೦೧೪ ರ, ಫೆಬ್ರವರಿ, ೨೮, ಶುಕ್ರವಾರದಂದು ಕೊನೆಯುಸಿರೆಳೆದರು.[[೧]] ಅವರು ಪತ್ನಿ,ಶಾರದಾಮಣಿ, ಮಗ ಋತ್ವಿಕ್, ಸೊಸೆ ಜಸ್ಲಿನ್, ಮತ್ತು ಮಗಳು ಅಖಿಲಾ,ಅಳಿಯ ದಿನೇಶ್ ರವಿರಾಜ್, ಸಹೋದರ ನಟ ಶ್ರೀನಾಥ್, ಮತ್ತು ಅಸಂಖ್ಯಾತ ಬಂಧುಗಳು ಮತ್ತು ಗೆಳೆಯರನ್ನು ಅಗಲಿ ಹೋಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ೧, ಮಾರ್ಚ್, ಶನಿವಾರದಂದು ಬೆಂಗಳೂರಿನ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಸಂಸ್ಕಾರ ಮಾಡಲಾಯಿತು. == ಉಲ್ಲೇಖಗಳು == [[೨]]